Rahul Dit-O | Nanna Kannada | Ft. MC Bijju | Official Music Video (4K) | Kannada Rap
Название: Rahul Dit-O | Nanna Kannada | Ft. MC Bijju | Official Music Video (4K) | Kannada Rap
Длительность: 00:04:47
Год: 2022-03-31 08:00:12
Добавил: Rahul Dit-O
Слушать песню
Скачать песню
tImSqnnwFac
Видео
#RahulDitO #McBijju #NannaKannada
ಕೇವಲ ನವೆಂಬರ್ ಒಂದಕ್ಕೆ ಸೀಮಿತವಲ್ಲದ ನಮ್ಮ ನಿಮ್ಮ ಕನ್ನಡದ ಪ್ರೇಮ ಏನೆಂದು ಇಡೀ ಜಗತ್ತಿಗೆ ಸಾರೋಣ .
ಎಲ್ಲರೂ ಗರ್ವದಿಂದ ತಲೆ ಎತ್ತಿ ಹೇಳೋಣ — #ನನ್ನಕನ್ನಡ #ನನ್ನಹೆಮ್ಮೆ
ಹಾಗೆ ಪ್ರತಿಯೊಬ್ಬ ಕನ್ನಡಿಗನಿಗೂ ಈ ಹಾಡನ್ನ ತಲುಪಿಸುವ ಜವಾಬ್ಧಾರಿ ನಿಮ್ಮದು ?? ಪಸರಿಸಿ ಪ್ರೋತ್ಸಾಹಿಸಿ ?❤️
Music Partner (Wynk Music) — https://wynk.in/music/song/nanna-kannada/bl_A10320WT042944303J
Create your videos using #NannaKannada on Moj and I’ll feature your best videos on my page
Listen to ‘Nanna Kannada’ on all audio stores — https://bfan.link/nanna-kannada.yde
Song Name: Nanna Kannada
Artist : Rahul Dit-O & MC Bijju
Director : Rahul Dit-O & Harish Victory
On the beat : DJ Lethal A
DOP : Deepak TL
Mix & Mastering : Sameer Kulkarni
Editor : S.I.D
Colorist : Nikhil Cariappa
Subtitles : Ashwin
Team Believe Artist Services
Instagram — https://www.instagram.com/rahul_dito/
Facebook — https://www.facebook.com/rahulditoofficial
Follow Believe on :- https://www.instagram.com/believeasd/
ಸಾಹಿತ್ಯ
ಚರಣ:
ನಾ ನಿಂತ ನಿಲುವು ಕನ್ನಡ ನಾ ಗೆದ್ದ ಗೆಲುವು ಕನ್ನಡ
ನನ್ನಿಚ್ಛೆಯಂತೆ ನಾಲಿಗೆ ಮೇಲೆ ಕುಣಿ ಕುಣಿದಾಡೊ ಕನ್ನಡ
ಸಂಗೀತದ್ ಒಲವು ಕನ್ನಡ ಸಾಹಿತ್ಯದ್ ಬಲವು ಕನ್ನಡ
ನನ್ನೆದೆಯ ಬಗೆದ್ದು ನೋಡು ನರನಾಡಿಗಳ ಮಿಡಿತ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನನ್ನ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನಮ್ಮ ಕನ್ನಡ
ಪಲ್ಲವಿ:
ಕಣ ಕಣದಲ್ಲೂ ಕನ್ನಡತನವ ಬಿಟ್ಟುಕೊಡದೇನೆ ಬದುಕುತಿರುವ
ಕನ್ನಡಾಭಿಮಾನಿಗಳಿಗೆಲ್ಲ ಈ ಕನ್ನಡಿಗ ಹೇಳೋದ್ ಒಂದೇನೆ
ಈ ಮಣ್ಣಿನ ಮೇಲೆ ನಾವಿರುವವರೆಗೂ ಮಣ್ಣಲ್ಲಿ ಮಣ್ಣಾಗಿ ಮಲೋಗೊವರೆಗೂ
ಕನ್ನಡಾಂಬೆಯ ಮಕ್ಕಳು ನಾವು ನಾವೆಲ್ಲರೂ ಒಂದೇನೆ
ಕನ್ನಡಿಗನಾಗಿ ಕನ್ನಡದ ಬೆಲೆ ಕನ್ನಡಿ ತರಾನೇ ತೋರಿಸುವೆ
ಈ ನೆಲದ ಮೇಲೆ ನನ್ ಋಣ ಇದೆ ಅದ್ನ ಕೊನೆವರೆಗೂನು ತೀರಿಸುವೆ
ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಪದಬಳಿಕೆಯ ಮೆರೆಸುವೆ
ಹಳದಿ ಕೆಂಪು ಭಾವುಟವ ತುಂಬ ಗರ್ವದಿಂದ ಹರಿಸುವೆ
ಅಂಗನವಾಡಿಯಿಂದ ಹಿಡಿದು ಒಂದ್ರಿಂದ ಹತ್ರೋರಗು
ಆ ಕಡೆ ಈ ಕಡೆ ತಲೆ ಹಾಕದೇನೆ ಕನ್ನಡ ಮಾಧ್ಯಮದಲ್ಲೇ ಓದಿರೋದು
ಆ ಇಂದ ಅಂ ಅಃ ವರೆಗೂ ಕ ಇಂದ ಕ್ಷ ಜ್ಞ ವರೆಗೂ
ಕರಿ ಹಲಿಗೆ ಮೇಲೆ ಬಿಳಿ ಬಳಪದಲ್ಲ್ ತಿದ್ದು ತಿದ್ದು ಕಲಿತಿರೋದು
ಆವತ್ತಿಂದ ಇವತ್ತಿನ ವರೆಗೂ ಇವತ್ತಿಂದ ಬದುಕಿರೋವರೆಗೂ
ಬೇರೆ ಭಾಷೆಗಳ ವ್ಯಾಮೋಹ ಬರದು ಕನ್ನಡವೇ ಉಸಿರಂತ ನಂಬಿರೋದು
ಭರವಸೆಗಳು ಬರೋವರೆಗೂ ಬದಲಾವಣೆ ತರೋವರೆಗೂ
ಹಠ ಬಿಡದೇನೆ ಪದ ಪದಗಳ ಜೋಡಿಸಿ ಜಾಗ್ರತೆ ಮೂಡಿಸುತಿರೋದು
ತಾಯಿ ಹೇಳಿಕೊಟ್ಟ ಭಾಷೆ ಕನ್ನಡ ಭಾಷೆ ಉಳಿಸುವ ಆಸೆ ಕನ್ನಡ
ತಂದೆ ಮಾಡಿಟ್ಟರೋ ಆಸ್ತಿ ಕನ್ನಡ ಅದಕ್ಕೆ ಬಳಸೋದ್ ಜಾಸ್ತಿ ಕನ್ನಡ
ಗುರು ಕಲಿಸಿದ ಪಾಠ ಕನ್ನಡ ಗುರಿ ಮುಟ್ಟೋಕೆ ಹೋರಾಟ ಕನ್ನಡ
ಮನ್ಸಿಂದ ಮಾತಾಡೋ ಮಾತೆ ಕನ್ನಡ ಜಗತ್ತನ್ನೇ ಗೆಲ್ಲೊ ಗೀತೆ ಕನ್ನಡ
ಶಿಳ್ಳೆ ಹೊಡ್ದು ನೋಡೋ ಸಿನಿಮಾ ಕನ್ನಡ ಎಲ್ಲೇ ಹೋದ್ರು ನಮ್ದೇ ನಿಯಮ ಕನ್ನಡ
ಯೋಧನ ಬಂದೂಕಿನ್ ಶಬ್ದ ಕನ್ನಡ ಕೇಡು ಬಯಸದ ಮುಗ್ಧ ಕನ್ನಡ
ರೈತನ ಕಾಲಿನ ಕೆಸರು ಕನ್ನಡ ಕೆಸರಿನಿಂದ ತಿನ್ನೋ ಪಸಲು ಕನ್ನಡ
ಎದೆ ತಟ್ಕೊಂಡ್ ಹೇಳ್ತೀನಿ ನನ್ನ ಉಸಿರು ಕನ್ನಡ ಕನ್ನಡ ಕನ್ನಡ
ಚರಣ:
ನಾ ನಿಂತ ನಿಲುವು ಕನ್ನಡ ನಾ ಗೆದ್ದ ಗೆಲುವು ಕನ್ನಡ
ನನ್ನಿಚ್ಛೆಯಂತೆ ನಾಲಿಗೆ ಮೇಲೆ ಕುಣಿ ಕುಣಿದಾಡೊ ಕನ್ನಡ
ಸಂಗೀತದ್ ಒಲವು ಕನ್ನಡ ಸಾಹಿತ್ಯದ್ ಬಲವು ಕನ್ನಡ
ನನ್ನೆದೆಯ ಬಗೆದ್ದು ನೋಡು ನರನಾಡಿಗಳ ಮಿಡಿತ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನನ್ನ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನಮ್ಮ ಕನ್ನಡ
ಪಲ್ಲವಿ:
ಕನ್ನಡದ್ ಕನ್ನಡಿ ಕನ್ನಡಿಗನೇ ಕಪಟ ಕ್ರಿಮಿಗಳಿಗ್ ಕಾಟ ಕೊಡ್ತಾನೆ
ದೇಶದ ಮಣ್ಣಿನ್ ಮೇಲೆ ಮಾಡ್ತಾನೆ ಕೆತ್ತನೆ, ಕನ್ನಡದ್ ಹಬ್ಬಕ್ಕೆ ಮಾಡುತ್ತಾ ಪ್ರಾರ್ಥನೆ
ಕನ್ನಡದ್ ತೋಟದ ಕಳೆಯ ಕೀಳ್ತಾನೆ, ಭಾಷಾಭಿಮಾನವ ಮಾಡ್ತಾನೆ ಬಿತ್ತನೆ
ನಾಡು ನುಡಿ ಬಗ್ಗೆ ಮಾಡ್ತಾನೆ ಚಿಂತನೆ, ಹುಸಿ ಕನ್ನಡಿಗರ್ ಬೈಗುಳ ತಿಂತಾನೆ
ಉಡುಪಿನ ಶೈಲಿ ಬದಲಾದ್ರು ಸಂಪ್ರದಾಯವಾಗದಿದು ಮಲಿನವೋ
ಸೊಗಡಿನ್ ಘಮವ ಸವಿದ ದೇಹಕ್ಕೆ ಮನೆಯು ಮನವು ಕೊಡುತೀವೋ
ದುರಭಿಮಾನವ ಹರಿತೀವೋ, ಕನ್ನಡ ಬಾವುಟ ಹಾಕೊಂಡು ಮೆರೀತಿವೋ
ಕೊಂಕು ಮಾತಾಡುವ ನೀಚ ನಾಲಿಗೆನ ಹೇಸಿಗೆ ತಾರ ನಾವ್ ಮರಿತಿವೋ
ನಮ್ ಸಂಭ್ರಮನ ನೋಡಿ ತಿಕ ಉರಿಕೊಳ್ತಿರೋದ್ ಯಾರು
ಬೇರೆಯವರ ಅಲ್ಲ ಗುರು ನಮ್ಮವ್ರೆ ಅದಿಕೆ ಬೇಜಾರು
ಕನ್ನಡದ ಪರ್ವತದಿಂದ ಕೆಳಗೆ ಮಗನೆ ಜಾರು
ಹೇಳೋದನ್ನೇ ಬರಿಯೋದಿಲ್ಲಿ ಅದುವೇ ನಮ್ ಕರಾರು
ಕನ್ನಡದ್ ಪ್ರೀತಿಯು ಮನಸಿಗೆ ಬೇಕು ಹಳದಿ ಕೆಂಪು ನಮ್ಮ ದೇಹಕ್ಕೆ ಸಾಕು
ಕಾವೇರಿ ತಾಯಿಗೆ ದೇಣಿಗೆ ಹಾಕು, ಆಮೇಲೆ ಮುಡಿಸು ದೇಶದ ಛಾಪು
ಹಿಂದಿ ಹೇರಿಕೆನಾ ಏರಿಸುವ ಹಂದಿಗಳ್ಗ್ ತಣ್ಣಗೆ ಮಾಡಲು ಹೇಳಿ ನಮ್ ಸಂಗಡ
ಕಲಿಯೋಕೆ ಕೋಟಿ ಭಾಷೆ ಆಡೊಕೊಂದೇ ಭಾಷೆ ಅದುವೇ ನಮ್ ಕನ್ನಡ ಕನ್ನಡ
ಪ್ರಪಂಚದ ಮೂಲೆ ಮೂಲೆ ಯಲ್ಲೂ ಹರಡಿರುವ ಕನ್ನಡಿಗರೇ ಕೇಳಿ
ಶಂಖದಿಂದ ಬಂದರೇನೇ ತೀರ್ಥ ಆ ಶಕ್ತಿನೇ ನಿಮ್ ಭಾಷೆ ಎದ್ದೇಳಿ
ಕನ್ನಡವ ಕನ್ನಡ್ ಅನ್ನುವರ ತಲೆಮೇಲ್ ಎರಡು ಕೊಟ್ಟ ಹೇಳಿ
ಶೋಷಣೆ ವಿರುದ್ಧ ಘೋಷಣೆ ಹಾಕಿರಿ ಹಾಕೋಬೇಡಿ ಅದ್ನ ಹೊಟ್ಟೇಲಿ
ಹರಿದ್ವರ್ಣದ ಕಾಡು ಶ್ರೀಗಂಧದ ಮರಗಳ ಸಾಲು
ಕೋಟಿದೀಪಗಳರಮನೆ ಅರಸರು ಹರಿಸಿದ ನಮ್ಮ ಈ ಕರುನಾಡು
ಶತಮಾನವ ಮೀರಿಸುವ ತಲೆಮಾರು, ಹೃದಯ ಕದೆವರಿಲ್ಲಿ ಕಲೆಗಾರರು
ಈ ಮನೆಯ ಬುನಾದಿಯನದುರಿಸಲಾರರು ಎಷ್ಟೇ ಜನ ಇದ್ರೂ ಮನೆಹಾಳ್ರು
ಚರಣ:
ನಾ ನಿಂತ ನಿಲುವು ಕನ್ನಡ ನಾ ಗೆದ್ದ ಗೆಲುವು ಕನ್ನಡ
ನನ್ನಿಚ್ಛೆಯಂತೆ ನಾಲಿಗೆ ಮೇಲೆ ಕುಣಿ ಕುಣಿದಾಡೊ ಕನ್ನಡ
ಸಂಗೀತದ್ ಒಲವು ಕನ್ನಡ ಸಾಹಿತ್ಯದ್ ಬಲವು ಕನ್ನಡ
ನನ್ನೆದೆಯ ಬಗೆದ್ದು ನೋಡು ನರನಾಡಿಗಳ ಮಿಡಿತ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನನ್ನ ಕನ್ನಡ
ಕನ್ನಡ ಕನ್ನಡ ಕನ್ನಡ ಕನ್ನಡ ಕನ್ನಡ ನಮ್ಮ ಕನ್ನಡ
#rahuldito #mcbijju #nannakannada
#NannaKannada #NannaHemme